Kannada Unicode Sample

The Kannada Language Kit for OS X can be used to create just about any type of text that uses the Kannada script.

This page is encoded as Unicode (utf-8) and requires a compatible browser like Opera and a properly encoded Kannada font. If you don't own the Kannada Language Kit for OS X and don't use a Macintosh, you can view a PDF version of this file.

ನಾವು ಮತ್ತು ನಮ್ಮ ದೇಶ

     ನಾವೆಲ್ಲ ಭಾರತೀಯರು. ನಾವು ನಮ್ಮ ದೇಶದ ಯಾವುದೇ ಪ್ರಾಂತ್ಯದ ನಿವಾಸಿಗಳಾಗಿರಬಹುದು ಅಥವಾ ಯಾವುದೇ ಜಾತಿ ಅಥವಾ ಮತಕ್ಕೆ ಸೇರಿರಬಹುದು, ಅಥವಾ ಯಾವುದೇ ಭಾಷೆಯನ್ನಾಡುವವರಾಗಿರಬಹುದು, ನಾವೆಲ್ಲಾ ಭಾರತೀಯರು.

     ನಮ್ಮ ಸಂಸ್ಕೃತಿ ಪುರಾತನವಾದದ್ದು. ನಮ್ಮ ದೇಶದಲ್ಲಿ ಅನೇಕ ಮಹಾನ್ ವ್ಯಕ್ತಿಗಳು, ಸಾದು ಸಂತರು, ತತ್ವ ಜ್ಞಾನಿಗಳು, ದೇಶ ಭಕ್ತರು, ಕವಿಗಳು, ಸಾಹಿತಿಗಳು, ಗಣಿತ, ವಿಜ್ಞಾನ, ಜ್ಯೋತಿಷ್ಯ, ಅಯುರ್ವೇದ ಮುಂತಾದ ಅನೇಕ ವಿಚಾರಗಳಲ್ಲಿ ಪಂಡಿತರು, ವೀರರು, ಶಿಲ್ಪ, ಸಂಗೀತ, ನಾಟ್ಯ, ನಾಟಕ, ಕುಶಲ ಕಲೆಗಳಲ್ಲಿ ಪರಿಣಿತರು ಹುಟ್ಟಿ ನಮ್ಮ ದೇಶದ ಹಾಗೂ ಮಾನವ ಕಲ್ಯಾಣಕ್ಕಾಗಿ ದುಡಿದಿದ್ದಾರೆ, ಶ್ರಮಿಸಿದ್ದಾರೆ. ಅವರು ದೇಶಕ್ಕೆ ವಿವಿಧ ಕೊಡುಗೆಗಳನ್ನು ಕೊಟ್ಟು ಮಹದುಪಕಾರ ಮಾಡಿದ್ದಾರೆ.

     ಅನೇಕ ದೇಶಭಕ್ತರ ಸತತ ಹೋರಾಟದ ಫಲವಾಗಿ ನಮ್ಮ ದೇಶವು ೧೯೪೭ನೇ ಇಸವಿ ಅಗಸ್‌್ಟ ೧೫ರಂದು ಸ್ವಾತಂತ್ರ್ಯ ಗಳಿಸಿತು. ಅನೇಕರು ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಮಹಾತ್ಮ ಗಾಂಧೀಜಿಯವರ ಪಾತ್ರವನ್ನು ಇಲ್ಲಿ ಸ್ಮರಿಸಬಹುದು. ಅವರು ಈ ಹೋರಾಟದಲ್ಲಿ ಹಿರಿಯ ನಾಯಕರಾಗಿದ್ದರು. ನಾವು ಸಾಧಿಸಬೇಕಾದ ಗುರಿ ಎಷ್ಟು ಒಳ್ಳೆಯದೋ, ಅದನ್ನು ಸಾಧಿಸುವ ಮಾರ್ಗವೂ ಕೂಡ ಅಷ್ಟೇ ಒಳ್ಳೆಯದಾಗಿರಬೇಕೆಂಬುದೇ ಅವರ ದೃಢ ಮತವಾಗಿತ್ತು. ಅದರಂತೆಯೇ ಅವರು ಸ್ವಾತಂತ್ರ‍್ಯಕ್ಕಾಗಿ ನಡಸಿದ ಹೋರಾಟದಲ್ಲಿ ಅಹಿಂಸಾ ತತ್ವವನ್ನು ಅನುಸರಿಸಿ ಇತರರಿಗೂ ಅದನ್ನೇ ಬೋಧಿಸಿದರು ಮತ್ತು ಮಾರ್ಗದರ್ಶನ ನೀಡಿದರು.

     ಇದುವರೆಗೂ ನಮ್ಮ ದೇಶವು ಅನೇಕ ವಿಚಾರಗಳಲ್ಲಿ ಪ್ರಗತಿ ಹೊಂದಿದೆ. ಇನ್ನೂ ಅಗಬೇಕಾದದ್ದು ಅಪಾರವಾಗಿದೆ. ಪ್ರತಿಯೊಬ್ಬರೂ (ಮಕ್ಕಳು, ಯುವಕರು, ಹಿರಿಯರು) ಅವರವರ ಸ್ಥಾನಮಾನಕ್ಕೆ ತಕ್ಕಂತೆ, ದೇಶಾಭಿಮಾನದಿಂದಲೂ, ಒಗ್ಗಟ್ಟನಿಂದಲೂ, ಪ್ರೀತಿ ಸೌಹಾರ್ದಗಳಿಂದಲೂ, ಪ್ರಾಮಾಣಿಕತೆಯಿಂದಲೂ, ಕಾರ್ಯ ನಿಪುಣತೆಯಿಂದಲೂ, ವಿವೇಚನೆಯಿಂದಲೂ, ನಮ್ಮ ರಾಷ್ಟೃದ ರಕ್ಷಣೆ ಮತ್ತು ಪ್ರಗತಿಗಾಗಿ ದುಡಿಯಬೇಕು. ಅಲ್ಲದೆ, ಈ ಕಾರ್ಯಗಳಲ್ಲಿ ನಿರತರಾದವರಿಗೆ ನೆರವು ನೀಡಬೇಕು. ಇದು ದೇಶಕ್ಕೆ ಒಳಿತು, ನಮಗೂ ಒಳಿತು.